ಬಜಗೋಳಿಯ ರವೀಂದ್ರ ಶೆಟ್ಟಿಯವರ ವತಿಯಿಂದ ಆಳ್ವರಿಗಿಂದು ‘ಬೆದರದ ಕಾಮಧೇನು’, ಮೂವರು ಸಾಧಕಿಯರಿಗೆ ‘ಅಂಬಾಶ್ರೀ’ ಬಿರುದು ಪ್ರದಾನ ಹಾಗೂ 6ನೇ ವರ್ಷದ ಗೋದಾನ

Picture of Namma Bedra

Namma Bedra

Bureau Report

ಉದ್ಯಮಿ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಅವರ ವತಿಯಿಂದ ಮೂಡುಬಿದಿರೆ ಆಳ್ವಾಸ್ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವರಿಗೆ ‘ಬೆದರದ ಕಾಮಧೇನು’ ಹಾಗೂ ಮೂವರು ಸಾಧಕಿಯರಿಗೆ ಧೀರಮಾತೆ ‘ಅಂಬಾಶ್ರೀ’ ಬಿರುದು ಪ್ರದಾನ ಹಾಗೂ ಆರನೇ ವರ್ಷದ ಗೋದಾನ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಬಜಗೋಳಿ ಅಂಬಿದಗುಂಡಿಯ ಎಸ್.ಪಿ.ಗಾರ್ಡನ್ ನಲ್ಲಿ ನಡೆಯಲಿದೆ.


ಆಳ್ವಾಸ್ ಕಾಲೇಜಿನಲ್ಲಿ ಕಲಿತು ಸಾಧನೆ ಮಾಡಿರುವ ಸಾಧಕಿಯರಾದ ಡಾ.ಶ್ರೀನಿಧಿ ಎಸ್.ಶೆಟ್ಟಿ ನಲ್ಲೂರು,ಕು.ದಿಶಾ ಪೂಜಾರಿ ಹಾಗೂ ಬಜಗೋಳಿಯ ಕು.ಸುಮಲತಾ ಅವರಿಗೆ ‘ಧೀರಮಾತೆ ಅಂಬಾಶ್ರೀ’ ಬಿರುದು ಪ್ರದಾನ ನಡೆಯಲಿದೆ.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರು ಡಾ.ಆಳ್ವರಿಗೆ ಬಿರುದು ಪ್ರದಾನ ಮಾಡಲಿದ್ದಾರೆ.
ಎನ್.ಆರ್.ದಾಮೋದರ ಶರ್ಮಾ ಅವರು ಶುಭಾಶಂಸನೆಗೈಯಲಿದ್ದು ಮೂಡುಬಿದಿರೆ ಉದ್ಯಮಿ ಕೆ.ಶ್ರೀಪತಿ ಭಟ್ ಸಹಿತ ಹಲವು ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಡಾ.ರವೀಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top