ತಾ.ಪಂ.ಮಾಜಿ ಸದಸ್ಯ, ಸಮಾಜ ಸೇವಕ ರುಕ್ಕಯ್ಯ ಪೂಜಾರಿ ಅವರು ಕೊಡುಗೆಯಾಗಿ ನೀಡಿದ ಎರಡು ಬಾರಿಕೇಡ್ ಗಳನ್ನು ಮೂಡುಬಿದಿರೆ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ.ಅವರು ಅಳಿಯೂರು ಜಂಕ್ಷನ್ ನಲ್ಲಿ ಶನಿವಾರ ಸಂಜೆ ಉದ್ಘಾಟಿಸಿದರು.
ಶಾಲಾ ವಠಾರವಾಗಿರುವುದರಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಕೆಲವೊಂದು ಘನವಾಹನಗಳು ಅತಿವೇಗದಿಂದ ಹೋಗುತ್ತಿರುವುದನ್ನು ಮನಗಂಡ ರುಕ್ಕಯ್ಯ ಪೂಜಾರಿ ಅವರು ರಸ್ತೆ ತಡೆಬೇಲಿ ( ಬಾರಿಕೇಡ್) ಗಳನ್ನಳವಡಿಸಿ ಸಾರ್ವಜನಿಕರು,ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಉದ್ಘಾಟನಾ ಸಂದರ್ಭದಲ್ಲಿ ವೇದಪ್ರಕಾಶ್ ಅಳಿಯೂರು, ಶಿವಾನಂದ ಪಾಂಡ್ರು, ಸುಕುಮಾರ್ ಜೈನ್,ಸನತ್ ಕುಮಾರ್ ಜೈನ್ ,ರತ್ನಾಕರ್, ಹರೀಶ್,ಸುಭಾಸ್,ಲೋಕೇಶ್,ವಿಶ್ವನಾಥ್ ಅಳಿಯೂರು ಮತ್ತಿತರರು ಉಪಸ್ಥಿತರಿದ್ದರು.
