Latest News

ವಾಲ್ಪಾಡಿ ಮದರಸಕ್ಕೆ ಶೇ.100 ಫಲಿತಾಂಶ

Picture of Namma Bedra

Namma Bedra

Bureau Report

2024-25 ನೇ ಸಾಲಿನ ಸಮಸ್ತ ಪಬ್ಲಿಕ್ ಪರೀಕ್ಷೆಯಲ್ಲಿ ವಾಲ್ಪಾಡಿ ನೂರುಲ್ ಹುದಾ ಮದರಸಾಕ್ಕೆ ಶೇ.100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ‌ ಇಪ್ಪತ್ತು ಮಂದಿ ವಿದ್ಯಾರ್ಥಿಗಳ ಪೈಕಿ 7 ನೇ ತರಗತಿಯಲ್ಲಿ ಐದು ಮಂದಿ ಉನ್ನತ ಶ್ರೇಣಿಯಲ್ಲಿ ಹಾಗೂ ನಾಲ್ಕು ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು 5 ನೇ ತರಗತಿಯಲ್ಲಿ ಇಬ್ಬರು ಉನ್ನತ ಶ್ರೇಣಿ ಹಾಗೂ ಒಂಭತ್ತು ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
7ನೇ ತರಗತಿಯ ಆಯಿಷಾ ರಿದಾ ( 475), ಆಯಿಷಾ ಶಿಹಾಮ ( 448),ಆಯಿಷಾ ಝೋಯ ( 429),ಮರ್ಯಮ್ ಅಖ್ಸಾ ( 453) ಹಾಗೂ ಆಯಿಷ ಸಹಲ ತಸ್ವಿ ( 450) ಉನ್ನತ ಶ್ರೇಣಿಯಲ್ಲಿ ತೇರ್ಗೇಗೊಂಡರೆ 5 ನೇ ತರಗತಿಯ ಮುಹಮ್ಮದ್ ಅನ್ವೀಝ್ ( 447) ಹಾಗೂ ಆಯಿಷ ಅಫ್ರಿನ್ ( 432) ಅವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಮತ್ತು ಈ ಫಲಿತಾಂಶಕ್ಕಾಗಿ ಶ್ರಮಿಸಿದ ಖತೀಬ್ ಅಬ್ಬಾಸ್ ಫೈಝಿ, ಸದರ್ ಅಬ್ದುಲ್ ಹಕೀಮ್ ಅಶ್ರಫಿ ಹಾಗೂ ಮುಅಝ್ಝಿನ್ ಹನೀಫ್ ಮುಸ್ಲಿಯಾರ್ ಅವರನ್ನು ಜಮಾತ್ ಕಮಿಟಿ ಅಧ್ಯಕ್ಷರಾದ ಶರೀಫ್ ಎಂ.ಎಂ,ಕಾರ್ಯದರ್ಶಿ ಝಕರಿಯಾ ಯೂಸುಫ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು