Latest News

ಶಮಿತ್ ರಾಜ್ ದರೆಗುಡ್ಡೆ ಅವರ ಸಹೋದರನ ಕೊಲೆಯತ್ನ

Picture of Namma Bedra

Namma Bedra

Bureau Report

ಹಿಂದೂ ಸಂಘಟನೆ ಮುಖಂಡ ಶಮಿತ್ ರಾಜ್ ದರೆಗುಡ್ಡೆ ಅವರ ಸಹೋದರ ಸಂತೋಷ್ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೆಗುಡ್ಡೆ ಗ್ರಾಮದ ರಬ್ಬರ್ ತೋಟ ಎಂಬಲ್ಲಿ ಎ. 5 ರ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಅದೇ ಪರಿಸರದ ಗಷೇಶ್ ಹಾಗೂ ಅಕ್ಷಿತ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ.


ಸಂತೋಷ್ ಅವರು ಭಾನುವಾರ ಸಂಜೆ ತನ್ನ ಆಕ್ಟಿವಾದಲ್ಲಿ ವಾಪಾಸು ಮನೆಗೆ ಬರುತ್ತಿರುವಾಗ ರಿಕ್ಷಾದಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದಾರೆ.ಸಂತೋಷ್ ಅವರ ಕಾಲಿಗೆ ತಲವಾರು ಏಟು ಬಿದ್ದಿದ್ದು ಅವರನ್ನು ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವಧ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ.ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ತನಿಖೆ ನಡೆಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು