ಮೂಡುಬಿದಿರೆ ಕೋಟೆಬಾಗಿಲು ಈದ್ಗಾ ಬಳಿಯ ನಿವಾಸಿ ಆದಮ್ (70) ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ಕೋಟೆಬಾಗಿಲು ನೂರುಲ್ ಇಸ್ಲಾಂ ಮದರಸ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಅವರು ಮೂಡುಬಿದಿರೆ ಹಾಗೂ ಕೋಟೆಬಾಗಿಲಿನಲ್ಲಿ ವ್ಯಾಪಾರಿಯಾಗಿ ಜನಪ್ರಿಯರಾಗಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.
