ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆ ರಸ್ತೆಯ ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಪೊಣ್ಣು ಬೋಡ ಖ್ಯಾತಿಯ ನಾರಾವಿಯ ಭರತ್ ಜೈನ್ ಹಾಗೂ ಮೂಡುಬಿದಿರೆ ಸ್ವರಾಜ್ಯ ಮೈದಾನ ಬಳಿಯ ನಿವಾಸಿ ರಾಜೇಶ್ ಬೋವಿ ಬಂಧಿತರು.
ಇವರಿಬ್ಬರು ಸಂತ್ರಸ್ತ ಮಹಿಳೆಯನ್ನು ಇಟ್ಟುಕೊಂಡು ಗ್ರಾಹಕರಿಗೆ ತೋರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಗಳನ್ನು ಬಂಧಿಸಿದ್ದರು.
ಬಂಧಿತರ ಪೈಕಿ ಭರತ್ ಜೈನ್ ಈ ಹಿಂದೆ ಕೂಡಾ ಇದೇ ರೀತಿಯ ಪ್ರಕರಣದಲ್ಲಿ ಖ್ಯಾತನಾಗಿದ್ದು ಬೇರೆ ಪ್ರಕರಣಗಳಲ್ಲೂ ಆರೋಪಿಯಾಗಿದ್ದ.






