ಬೆದ್ರ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆ: ರಕ್ಷಿತ್, ವಿಠಲ್ ಭಟ್, ರೋಹಿತ್ ನಾಯ್ಕ್, ಶ್ರೇಯಾ ಪ್ರಥಮ

Picture of Namma Bedra

Namma Bedra

Bureau Report

ಮೂಡುಬಿದಿರೆ ಸಮಾಜ ಮಂದಿರ ಹಾಗೂ ಯುವವಾಹಿನಿ ಘಟಕದ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ 4 ನೇ ವರ್ಷದ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಈ ಕೆಳಗಿನಂತಿದೆ.
ಗೂಡುದೀಪ ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್ ಕುಮಾರ್- ಪ್ರಥಮ, ಸುರೇಂದ್ರ ಅಮೀನ್ -ದ್ವಿತೀಯ, ಭೋಜ ಅಚ್ಚರಕಟ್ಟೆ- ತೃತೀಯ.
ಆಧುನಿಕ ವಿಭಾಗದಲ್ಲಿ ವಿಠಲ್ ಭಟ್ ಮಂಗಳೂರು ಪ್ರಥಮ, ವೈಶಲ್ ಅಂಚನ್ ಸುಂಕದಕಟ್ಟೆ- ದ್ವಿತೀಯ, ಜನಾರ್ದನ ನಿಡ್ಡೋಡಿ- ತೃತೀಯ.
ಮಾದರಿ ವಿಭಾಗದಲ್ಲಿ ರೋಹಿತ್ ನಾಯ್ಕ್ ಸಂಪಿಗೆ ಪ್ರಥಮ, ರಂಜಿತ್ – ದ್ವಿತೀಯ, ಯತೀಶ್ ಆಚಾರ್ಯ- ತೃತೀಯ.
ರಂಗೋಲಿ ಸ್ಪರ್ಧೆಯಲ್ಲಿ ಶ್ರೇಯಾ ಪ್ರಥಮ, ಶ್ರವಣ್ಯಾ ಆಚಾರ್ಯ- ದ್ವಿತೀಯ, ಸಾನ್ವಿ- ತೃತೀಯ.
ಸಮಾಧಾನಕರ ಬಹುಮಾನ:ಅನುಷಾ,ಪ್ರೇರಣಾ,ಸಹನ್ಯಾ ಕೋಟ್ಯಾನ್.
ಸಮಾಜ ಮಂದಿರದಲ್ಲಿ ನಡೆದ ಸ್ಪರ್ಧೆಯನ್ನು ಸಮಾಜ ಮಂದಿರ ಸಭಾದ ಅಧ್ಯಕ್ಷರು ಉದ್ಘಾಟಿಸಿದರು.


ಯುವವಾಹಿನಿ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ, ವಾಗ್ಮಿ ಅಜಿತ್ ಕುಮಾರ್ ಪಾಲೇರಿ, ಉದ್ಯಮಿಗಳಾದ ಅಬುಲ್ ಅಲಾ ಪುತ್ತಿಗೆ, ಜಾವೆದ್ ಶೇಖ್,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು,ಸಲಹೆಗಾರ ಕುಮಾರ್ ಪೂಜಾರಿ ಇರುವೈಲ್,ಸಮಾಜ ಮಂದಿರ ಸಭಾ ಕಾರ್ಯದರ್ಶಿ,ಪುರಸಭಾ ಸದಸ್ಯರಾದ ಸುರೇಶ್ ಪ್ರಭು,ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ,ಯುವವಾಹಿನಿ ಸಲಹೆಗಾರ್ತಿ ವಿನುತಾ ಆನಂದ್, ರಕ್ತದಾನಿ ,ಯುವವಾಹಿನಿ ಉಪಾಧ್ಯಕ್ಷ ಗಿರೀಶ್ ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಗದೀಶ್ಚಂದ್ರ ಡಿ.ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ನವಾನಂದ ಬಹುಮಾನ ವಿಜೇತರ ವಿವರ ನೀಡಿದರು. ಶಂಕರ್ ಎ.ಕೋಟ್ಯಾನ್ ಹಾಗೂ ಸುಧಾಕರ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಮೇಘನಾ ವಂದಿಸಿದರು.
ಕಾರ್ಯದರ್ಶಿ ವಿನೀತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top