ಪುರಸಭೆಯವರೇ, ಪಾರ್ಕಿಂಗ್ ಪ್ರಾಬ್ಲೆಮ್ ಒಂದೇ ವಾರದಲ್ಲಿ ಕ್ಲೀಯರ್ ಅಂತ ನೀವು ಹೇಳಿದ್ದು…… ಏನಿಲ್ಲಾ,.. ಹೀಗೇ ನೆನಪು ಮಾಡಿದ್ದು…!

Picture of Namma Bedra

Namma Bedra

Bureau Report

ಒಂದು ತಿಂಗಳು ಕಳೆದಿದೆ.ಬೆದ್ರ ಬಸ್ಸು ನಿಲ್ದಾಣದ ಇಂದಿರಾಗಾಂಧಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಸೀತಾರಾಮಣ್ಣನ ಆಫೀಸಿನೆದುರು ಒಂದಿಷ್ಟು ಚೆಯರ್ಸ್ ಹಾಕಿ,ಒಂದು ಸಣ್ಣ ಸೌಂಡ್ ಬಾಕ್ಸ್ ಇಟ್ಟು ಮೀಟಿಂಗ್ ಮಾಡಿದ್ದು ನೆನಪಿದೆ ಯಲ್ಲವೇ ?
ಅದು ಇಲ್ಲಿನ ಪಾರ್ಕಿಂಗ್ ಸಮಸ್ಯೆಗಾಗಿ ನಡೆದ ಮೀಟಿಂಗ್. ಆ ಮೀಟಿಂಗ್ ಗೆ ಪುರಸಭೆಯ ಮುಖ್ಯಾಧಿಕಾರಿ ಇಂದು ಮೇಡಂ, ಇನ್ಸ್ಪೆಕ್ಟರ್ ಸಂದೇಶ್ ಸರ್, ಪುರಸಭಾ ಉಪಾಧ್ಯಕ್ಷರಾದ ನಾಗರಾಜ್ ಸರ್,ಬಸ್ಸು ಮಾಲಕರ ಸಂಘದವರು,ಅಂಗಡಿ ಮಾಲಕರು ಬಂದಿದ್ದರು.ಪುರಸಭೆಯ ಅಧಿಕಾರಿವರ್ಗದವರೂ ಬಂದಿದ್ದರು. ಹಾಗೆ ಬಂದವರು ಮೀಟಿಂಗ್ ನಲ್ಲಾದ ಚರ್ಚೆಯ ಬಗ್ಗೆ ನೋಟ್ ಮಾಡಿಕೊಂಡಿದ್ದರು.
ಆ ಮೀಟಿಂಗ್ ನಲ್ಲಿ ಆದ ಒಟ್ಟು ನಿರ್ಧಾರವೆಂದರೆ ಒಂದೇ ವಾರದಲ್ಲಿ ಇಲ್ಲಿನ ಎಲ್ಲಾ ಪ್ರಾಬ್ಲೆಮ್ ಗಳೂ ಕ್ಲೀಯರ್ ಆಗುತ್ತದೆ ಎನ್ನುವುದಾಗಿತ್ತು.ಮೀಟಿಂಗ್ ಮುಗಿದ ಕೂಡಲೇ ಅಂಗಡಿ ಮಾಲಕರೆಲ್ಲಾ ಕುಷಿಯಿಂದ ಹೋಗಿದ್ದರು.


ರಡ್ಡ್ ಚಕ್ರದ ಗಾಡಿಗಳದ್ದೇ ಉಪದ್ರ ಅಂತ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿ ಬಸ್ ಸ್ಟಾಂಡಿಗೆ ಬರುವ ಟೂ ವೀಲರ್ಸ್ ಗಳನ್ನು ಬಿ.ಸಿ.ರೋಡ್, ಕಟೀಲಿಗೆ ಹೋಗುವ ಬಸ್ಸು ನಿಲ್ಲಿಸುತ್ತಾರಲ್ಲಾ….ಅಲ್ಲಿ ಹಿಂಬದಿ ಸ್ವಲ್ಪ ಜಾಗವನ್ನು ಲೆವೆಲ್ ಮಾಡಲಾಗಿದೆ- ಅಲ್ಲಿ ನಿಲ್ಲಿಸಬೇಕು, ಮತ್ತೆ ಕೆಲವನ್ನು ಮೈನೀರ್ ಅನ್ಲೋಡ್ ಮಾಡಲು ಹೋಗುವ ಪಬ್ಲಿಕ್ ಟಾಯ್ಲೆಟ್ ಉಂಟಲ್ಲಾ…ಅಲ್ಲಿ ನಿಲ್ಲಿಸಬಹುದೆಂದು ನಿರ್ಧರಿಸಲಾಗಿತ್ತು.ಅಲ್ಲಿ ಆ ಹೋಟೆಲ್ ನವರು ಮಾಡಿದ್ದ ಪುಗೆಪತ್ತಿನ ಗೋಡೆಗಳನ್ನು ನೆಲಸಮಗೊಳಿಸಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಬೇಕಾದಷ್ಟು ಜಾಗ ಮಾಡಬಹುದು ಎಂದು ಪುರಸಭಾಧಿಕಾರಿಗಳು ಮೂಗಿಗೆ ಕೈ ಇಟ್ಟುಕೊಂಡೇ ಜಾಗನೋಡಿ ಎಡ್ವಾನ್ಸ್ ಮಾಡಿದಂತೆ ಬಂದಿದ್ದರು.ಇಂದಿರಾಗಾಂಧಿ ಕಾಂಪ್ಲೆಕ್ಸ್ ಎದುರು ಕೇವಲ ಒಂದೇ ಲೈನ್ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬೇಕು, ಉಳಿದ ಹೆಚ್ಚು ಚಕ್ರಗಳ ವಾಹನಗಳನ್ನು ಓ..ಅಲ್ಲಿ, ಅಂದರೆ ನಿಲ್ದಾಣದ ಇನ್ನೊಂದು ಮೂಲೆಯಲ್ಲಿ ನಿಲ್ಲಿಸಬೇಕೆಂದು ನಿರ್ಧಾರ ಮಾಡಲಾಗಿತ್ತು.
ಮರುದಿನವೇ ಬೆಳ್ಳಂಬೆಳಗ್ಗೆ ಆ ಸಾಯ್ಬೆರ್ ತನಗೆ ನೀಡಿದ್ದ ಆರ್ಡರ್ ಪ್ರಕಾರ ಕಾಂಪ್ಲೆಕ್ಸ್ ಎದುರು ಹಳದಿ ಬಣ್ಣದ ಪೈಂಟಲ್ಲಿ ಮಾರ್ಕಿಂಗ್ ಮಾಡಿ ಹೋಗಿದ್ದರು.ಅವತ್ತೇ ಬೆಳಿಗ್ಗೆ ಪಿರಿಪಿರಿ ಮಳೆ ಬಂದಿದ್ದರಿಂದ ಆ ಹಳದಿ ಬಣ್ಣದ ಪೈಂಟು ಕುರಿನೀರ್ ತಲ್ತ್ ಲೆಕ ಆಗಿ ಒಂದಿಷ್ಟು ಚೆಲ್ಲಿತ್ತಾದರೂ ಈಗ ಒಣಗಿದೆ.
ಅದೆಲ್ಲಾ ಆಗಿ ಒಂದು ತಿಂಗಳೇ ಕಳೆದಿದೆ.ಮೀಟಿಂಗ್ ಮಾಡಿದ್ದು ಮಾತ್ರ. ಮಂಜೊಲು ಪೈಂಟ್ ಮಾಡಿದ್ದೊಂದು ಬಿಟ್ಟರೆ ಬೇರಾವ ಪ್ರೋಗ್ರಸ್ಸೂ ಆಗಿಲ್ಲ.
ಈಗ ದಾದಾಗಿದೆಯೆಂದರೆ,,,ಪುರಸಭೆಯವರು ಪೊಕ್ಕಡೆ ಮೀಟಿಂಗ್ ಮಾಡುವುದು, ದಾಲಾಪುಜಿಯ ಅಂತ ಟೂ ವೀಲರ್ಸ್ ನವರ ಸಂಖ್ಯೆ ಹೆಚ್ಚುತ್ತಿದೆ.ಕೆಲವರಂತೂ ತಮ್ಮ ಪಿತ್ರಾರ್ಜಿತವಾಗಿ ಬಂದ ಆಸ್ತಿ ಎಂಬಂತೆ ಬೆಳಿಗ್ಗೆ ನಿಲ್ಲಿಸಿ ಹೋದರೆ ಮತ್ತೆ ಸಂಜೆಯೇ ಸ್ಟಾರ್ಟ್ ಮಾಡೋದು.ಕೆಲವು ನಾಲ್ಕು ಚಕ್ರಗಳ ವಾಹನಗಳಿಂದ ಬಸ್ಸಿನವರಿಗೂ ತೊಂದರೆಯಾಗುತ್ತಿದೆ.ಪುರಸಭೆಗೆ ಆದಾಯ ಮಾಡಿಕೊಡುವ ಅಂಗಡಿಯವರಿಗೆ ಅನ್ಯಾಯವಾಗುತ್ತಿದೆ.
ನೀವು ಹಾಕಿದ ಗೆರೆಗಳು ಮಾಯವಾಗುತ್ತಿದೆ- ಕೆಲವು ವಾಹನಗಳು ಮಾಯವಾಗುತ್ತಿದೆ!
ಪುರಸಭೆಯವರು ಒಂದು ವ್ಯವಸ್ಥೆ ಮಾಡಿಕೊಟ್ಟರೆ ಪೊಲೀಸ್ ಇಲಾಖೆಗೂ ಅನುಕೂಲವಾಗುತ್ತದೆ.ಎಲ್ಲಾ ವ್ಯವಸ್ಥೆಗಳಾಗಿ, ಇತರ ವಾಹನಗಳ ನಿಲುಗಡೆ ನಿರ್ಬಂಧಿಸಿದ ನಂತರವೂ ವಾಹನಗಳ ನಿಲುಗಡೆಯಾದರೆ ಅಂತಹ ವಾಹನಗಳಿಗೆ ಒಂದೆರಡು ಸಲ ಬೀಗ ಹಾಕಿದರೆ ಮತ್ತೆ ಸುಧಾರಣೆಯಾಗುತ್ತದೆ.
ಆವತ್ತಿನ ಮೀಟಿಂಗ್ ಗೆ ಬಂದಿದ್ದ ಆ ಬೊಲ್ದು ಕಲರಿನ ಎರಡು ಬೊಲೆರೋಗಳು ಮತ್ತೆಂದು ಬಂದೀತು?? ಅಂತ ಅಂಗಡಿ ಮಾಲಕರು ಕಾಯುತ್ತಿದ್ದಾರೆ!

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top