ಹೊಸಂಗಡಿ: ಕಾರು ಢಿಕ್ಕಿ: ಬಾಲಕ ಮೃತ್ಯು

Picture of Namma Bedra

Namma Bedra

Bureau Report

ಮಾರೂರು ಹೊಸಂಗಡಿ ಬಳಿ ಇಂದು ಮಧ್ಯಾಹ್ನ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬನಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಆ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ.
ಹೊಸಂಗಡಿಯ ನಝೀರ್ ಎಂಬವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ.
ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದು ಇಂದು ಮಧ್ಯಾಹ್ನ ಅಂಗಡಿಗೆಂದು ನಡೆದುಕೊಂಡು ಹೋಗುತ್ತಿದ್ದನೆನ್ನಲಾಗಿದೆ.
ಈ ಸಂದರ್ಭದಲ್ಲಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.ಪರಿಣಾಮ ಝಾಹಿರ್ ಮೃತಪಟ್ಟಿದ್ದಾನೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top