ಗುರುಪುರ ನದಿಗೆ ಹಾರಿ ಅಲಂಕಾರ್ ಉದ್ಯೋಗಿ ಯುವತಿ ಆತ್ಮಹತ್ಯೆ *ಶವ ಮೇಲಕ್ಕೆತ್ತಲು ನೆರವಾಗುತ್ತಿರುವ ಮಿಥುನ್ ರೈ

Picture of Namma Bedra

Namma Bedra

Bureau Report

ಮೂಡುಬಿದಿರೆ ಅಲಂಕಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮೂಡುಬಿದಿರೆಯ ಯುವತಿಯೋರ್ವಳು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೂಡುಬಿದಿರೆ ಗಾಂಧಿನಗರ ಸಮೀಪದ ನವ್ಯ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡವಳು. ಈಕೆ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಳು.


ಗುರುಪುರದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಿ ಕೂಡಲೇ ತಮ್ಮ ಬೆಂಬಲಿಗರೊಂದಿಗೆ ಶವ ಮೇಲಕ್ಕೆತ್ತಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ.
ನವ್ಯಳ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ನವ್ಯಳೊಂದಿಗೆ ನಿಡ್ಡೋಡಿ ಮೂಲದ ಮತ್ತೋರ್ವಳು ಯುವತಿ ಕೂಡಾ ಇದ್ದಳೆನ್ನಲಾಗಿದ್ದು ಈ ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top