ಬೆದ್ರ ಬಸ್ಟಾಂಡ್: ಟೂ ವೀಲರ್ಸ್ ಗೆ ಹೊಸದಾರಿ ತೋರಿಸಿದ ಪುರಸಭೆ

Picture of Namma Bedra

Namma Bedra

Bureau Report

ಬೆದ್ರ ಬಸ್ ಸ್ಟಾಂಡಲ್ಲಿ ಕಂಡಕಂಡಲ್ಲಿ ಟೂ ವೀಲರ್ಸ್ ಪಾರ್ಕಿಂಗ್ ಗೆ ಇನ್ನು ಬ್ರೇಕ್ ಬೀಳಲಿದೆ.
ಕೆಲವು ಬಾರಿ ಸಭೆ ನಡೆಸಿ ಬೇರೆ ಬೇರೆ ಐಡಿಯಾಗಳನ್ನು ಹಾಕಲಾಗಿತ್ತಾದರೂ ದ್ವಿಚಕ್ರ ವಾಹನಗಳ ಕಿರಿಕಿರಿ ತಪ್ಪಲಿಲ್ಲ.
ಬಸ್ಸು ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋದರೆ ಮತ್ತೆ ಸಂಜೆವೇಳೆಗೆ ವಾಪಾಸು ಬರುವವರು ತುಂಬಾ ಮಂದಿ ಇದ್ದಾರೆ.ಅಲ್ಲದೆ ಜಾಗ ಸಿಕ್ಕಲ್ಲಿ ಪಾರ್ಕಿಂಗ್ ಮಾಡುವುದರಿಂದ ಬಸ್ಸುಗಳ ನಿಲುಗಡೆಗೆ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿ ಇಲ್ಲಿನ ಅಂಗಡಿ ಮಾಲಕರಿಗೂ ವ್ಯಾಪಾರಕ್ಕೆ ತೊಂದರೆಯಾಗಿತ್ತು.
ಈಬಗ್ಗೆ ಎರಡು ತಿಂಗಳ ಹಿಂದೆ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಇಲ್ಲಿನ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದೆದುರು ಒಂದೇ ಲೈನ್ ನಲ್ಲಿ ದ್ವಿಚಕ್ರ ವಾಹನ ನಿಲುಗಡೆ, ಉಳಿದಂತೆ ಬಸ್ಸುಗಳ ನಿಲುಗಡೆಗೆ ಮತ್ತು ನಿಲ್ದಾಣದ ಇನ್ನೊಂದು ತುದಿಯಲ್ಲಿ ಇತರ ವಾಹನಗಳ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗಿತ್ತು.ಆದರೆ ಅದ್ಯಾವುದೂ ಪರಿಣಾಮಕಾರಿಯಾಗಲಿಲ್ಲ.


ಇದೀಗ ಈ ಸಂಕೀರ್ಣದ ಎಡಭಾಗದಲ್ಲಿ ಅಂದರೆ ಪಕ್ಕದ ಕಟ್ಟಡದ ಪಕ್ಕದಲ್ಲಿ ಇದ್ದ ಜಾಗವನ್ನು ಸರಿತಟ್ಟುಗೊಳಿಸಿ,ಅದನ್ನು ಅಗಲಮಾಡಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ‌.ಇಲ್ಲಿ ಸಾಕಷ್ಟು ಜಾಗ ಕೂಡಾ ಇದೆ.ಇದೇ ದಾರಿಯಲ್ಲಿ ಹೋಗಿ ಶೌಚಾಲಯದ ಹಿಂಬದಿಯಲ್ಲೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು. ಮೂಡುಬಿದಿರೆ ಪುರಸಭೆಯವರು ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕಿರಿಕಿರಿಗೆ ಬ್ರೇಕ್ ಹಾಕುವ ಕೆಲಸ ಮಾಡಿ ಸೈ ಎನಿಸಿದ್ದಾರೆ.ಗುತ್ತಿಗೆದಾರ ಗಿರೀಶ್ ಅವರು ಈ ಕೆಲಸದ ಜವಾಬ್ದಾರಿ ವಹಿಸಿಕೊಂಡು ಕೆಲಸ ನಡೆಯುತ್ತಿದೆ.
ಇದಲ್ಲದೆ ಈ ಸಂಕೀರ್ಣದ ಕೆಲವು ಅಂಗಡಿಗಳ ಸಾಮಾಗ್ರಿಗಳು ಅಂಗಡಿಯಿಂದ ಹೊರಬರುತ್ತಿದ್ದು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಇಂದು ಎಂ.ಅವರು ಬಂದು ಎಚ್ಚರಿಕೆ ನೀಡಿ ಹೋಗಿದ್ದಾರೆ. ಮುಂದೆ ಈ ರೀತಿಯಾದರೆ ಸಾಮಾಗ್ರಿಗಳು ಪುರಸಭೆಯ ವಾಹನಗಳಿಗೆ ಲೋಡ್ ಆಗುವ ಚಾನ್ಸ್ ಇದೆ!

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top