ವಿಶಿಷ್ಟ ಹೆಸರಿನ ಮೂಲಕ ಮನೆಮಾತಾಗಿರುವ ಮೂಡುಬಿದಿರೆಯ ‘ ಗೋಳಿಬಜೆ ಸೆಂಟರ್’ ಇಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡು ತನ್ನದೇ ಆದ ಗ್ರಾಹಕರನ್ನು ಹೊಂದಿರುವ ಗೋಳಿಬಜೆ ಸೆಂಟರ್ ಇಂದಿಗೆ ಮೂರು ವರ್ಷ ಪೂರೈಸಿದೆ.
ಸಾಮಾಜಿಕವಾದ ಹೋರಾಟಗಳ ಮೂಲಕ ಸುದ್ಧಿಯಾಗಿದ್ದ ಸುದತ್ತ ಜೈನ್ ಶಿರ್ತಾಡಿ ಅವರು ಹಿಂದೆ ಮಂಗಳೂರಿನ ಹೊಟೇಲ್ ಸಿಬ್ಬಂದಿಯಾಗಿದ್ದರು. ಕಾರ್ಮಿಕರಾಗಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲೂ ಮುಂಚೂಣಿಯಲ್ಲಿದ್ದವರು.


ಆ ಸಂದರ್ಭದಲ್ಲಿ ಕೆಲವು ಹೋರಾಟಗಳಿಗಾಗಿ ಕೆಲವು ಕೇಸುಗಳೂ ಸುದತ್ತ ಅವರ ಮೇಲೆ ಬಿದ್ದಿತ್ತು. ಕೆಲವರು ‘ಆಯೆ ಗೋಳಿಬಜೆ ಬುಡ್ಪಿನಾಯೆ’ ಎಂದು ಮೂದಲಿಸಿದ್ದೂ ಇದೆ. ಆದರೆ ಅದೇ ‘ ಗೋಳಿಬಜೆ’ ಹೆಸರನ್ನು ಹಿಡಿದುಕೊಂಡು ಮೂಡುಬಿದಿರೆಯಲ್ಲೊಂದು ಹೊಟೇಲ್ ಪ್ರಾರಂಭಿಸಿ ವಿರೋಧಿಗಳೆದುರು ಯಶಸ್ವಿಯಾದ ಕಥೆ ಅವರದ್ದು. ಗೋಳಿಬಜೆ ಸೆಂಟರ್ ಮೂಲಕ ತುಳುನಾಡಿನ ಜನಪ್ರಿಯ ತಿಂಡಿಯಾಗಿರುವ ಗೋಳಿಬಜೆ ಮತ್ತು ಅವರ ಹೆಸರನ್ನೂ ಮತ್ತಷ್ಟು ಎತ್ತರಕ್ಕೇರಿಸಿಕೊಂಡಿರುವ ಸುದತ್ತ ಜೈನ್ ಅವರು ತನ್ನ ಮನೆಯವರು ಮತ್ತು ಸಿಬ್ಬಂದಿಗಳ ಮೂಲಕ ಒಂದು ಶುಚಿರುಚಿಯಾದ ತಿಂಡಿಗಳ ಮೂಲಕ ಇಂದು ಮನೆಮಾತಾಗಿದ್ದಾರೆ.
ಲಾಭವೋ, ನಷ್ಟವೋ ಗೊತ್ತಿಲ್ಲ. ಆದರೆ ಶುಚಿರುಚಿಯಾದ ತಿಂಡಿಗಳ ಮೂಲಕ ತನ್ನದೇ ಆದ ಗ್ರಾಹಕರನ್ನು ಹೊಂದಿ ಕೆಲವೊಮ್ಮೆ ಕ್ಯೂ ನಿಲ್ಲಿಸುವಷ್ಟು ಸಕ್ಸಸ್ ಆಗಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸಾಗಲಿ ಎಂಬ ಹಾರೈಕೆ ನಮ್ಮದು.
ಅಂದಹಾಗೆ, ಇಂದು ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತುರುವ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಒಂದು ತಿಂಡಿ ಫ್ರೀ ಎಂದು ಸುದತ್ತ ಜೈನ್ ಅವರು ತಿಳಿಸಿದ್ದಾರೆ.










