Welcome ಬೆದ್ರ ಕಂಬುಲ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಇಪ್ಪತ್ತಮೂರನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್.
ಪ್ರತಿವರ್ಷದಂತೆ ಈಬಾರಿ ಕೂಡಾ ಬೆದ್ರ ಕಂಬಳವು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯಲಿದೆ, ಕೋಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ, ಕಂಬಳಕ್ಕೆ ಬರುವವರ ವಾಹನಗಳ ಪಾರ್ಕಿಂಗ್ ಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಪಾರ್ಕಿಂಗ್ ವ್ಯವಸ್ಥೆ ಸುಗಮವಾಗಲು ಯುವಕರ ತಂಡವೊಂದಿದೆ ಎಂದ ಅವರು ನಮ್ಮ ಈ ಕಂಬಳದಲ್ಲಿ ಮೂಡುಬಿದಿರೆ ಸಹಿತ ದೂರದೂರದಿಂದ ದೊಡ್ಡ ಸಂಖ್ಯೆಯಲ್ಲಿ ಸರ್ವರೂ ಪಾಲ್ಗೊಳ್ಳುತ್ತಾರೆ, ಇದು ಕೇವಲ ಕಂಬಳ ಮಾತ್ರವಲ್ಲದೆ ಸರ್ವರ ಒಗ್ಗೂಡುವಿಕೆಯ ಒಂದು ಉತ್ಸವವಾಗಿದೆ ಎಂದಿದ್ದಾರೆ.
ಕಂಬಳ ಕರೆಯ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ಮುತುವರ್ಜಿ ವಹಿಸಿರುವ ರಂಜಿತ್ ಪೂಜಾರಿ ಅವರು ಕಂಬಳ ಸಮಿತಿಯ ಕಾರ್ಯದರ್ಶಿಯಾಗಿ ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಪ್ರತಿವರ್ಷದಂತೆ ಈಬಾರಿ ಕೂಡಾ ರಂಜಿತ್ ಅವರಿಗೆ ದೊಡ್ಡ ಜವಾಬ್ದಾರಿ ಇದ್ದು ಅದನ್ನವರು ಯಶಸ್ವಿಯಾಗಿ ನಿರ್ವಹಿಸುತ್ತಾ ಸರ್ವಜನರ ಪ್ರೀತಿಗೆ ಪಾತ್ರರಾಗಿದ್ದಾರೆ ‌.ಮೂಡುಬಿದಿರೆಯ ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಇಪ್ಪತ್ತಮೂರನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳಕ್ಕೆ ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸಿದ್ದಾರೆ ಕಂಬಳ ಸಮಿತಿಯ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್.
ಪ್ರತಿವರ್ಷದಂತೆ ಈಬಾರಿ ಕೂಡಾ ಬೆದ್ರ ಕಂಬಳವು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ನಡೆಯಲಿದೆ, ಕೋಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ, ಕಂಬಳಕ್ಕೆ ಬರುವವರ ವಾಹನಗಳ ಪಾರ್ಕಿಂಗ್ ಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಪಾರ್ಕಿಂಗ್ ವ್ಯವಸ್ಥೆ ಸುಗಮವಾಗಲು ಯುವಕರ ತಂಡವೊಂದಿದೆ ಎಂದ ಅವರು ನಮ್ಮ ಈ ಕಂಬಳದಲ್ಲಿ ಮೂಡುಬಿದಿರೆ ಸಹಿತ ದೂರದೂರದಿಂದ ದೊಡ್ಡ ಸಂಖ್ಯೆಯಲ್ಲಿ ಸರ್ವರೂ ಪಾಲ್ಗೊಳ್ಳುತ್ತಾರೆ, ಇದು ಕೇವಲ ಕಂಬಳ ಮಾತ್ರವಲ್ಲದೆ ಸರ್ವರ ಒಗ್ಗೂಡುವಿಕೆಯ ಒಂದು ಉತ್ಸವವಾಗಿದೆ ಎಂದಿದ್ದಾರೆ.
ಕಂಬಳ ಕರೆಯ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ಮುತುವರ್ಜಿ ವಹಿಸಿರುವ ರಂಜಿತ್ ಪೂಜಾರಿ ಅವರು ಕಂಬಳ ಸಮಿತಿಯ ಕಾರ್ಯದರ್ಶಿಯಾಗಿ ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ಪ್ರತಿವರ್ಷದಂತೆ ಈಬಾರಿ ಕೂಡಾ ರಂಜಿತ್ ಅವರಿಗೆ ದೊಡ್ಡ ಜವಾಬ್ದಾರಿ ಇದ್ದು ಅದನ್ನವರು ಯಶಸ್ವಿಯಾಗಿ ನಿರ್ವಹಿಸುತ್ತಾ ಸರ್ವಜನರ ಪ್ರೀತಿಗೆ ಪಾತ್ರರಾಗಿದ್ದಾರೆ ‌.
ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಕಂಬಳವು ತನ್ನದೇ ಆದ ಹೆಸರನ್ನು ಗಳಿಸಿಕೊಂಡಿದೆ,ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಮಾಡುತ್ತಿದ್ದೇವೆ, ಸರ್ವರ ಸಹಕಾರವೇ ನಮ್ಮ ಕಂಬಳದ ಯಶಸ್ಸಿಗೆ ಕಾರಣವೆಂದು ರಂಜಿತ್ ಪೂಜಾರಿ ಅವರು ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top