ಮೂಡುಬಿದಿರೆ ತಾಲೂಕು ನಮ್ಮ ನಾಡ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶೇಖ್ ನೂರುದ್ದೀನ್ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಅಶ್ರಫ್ ಮರೋಡಿ, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಮದನಿ,ಖಜಾಂಚಿಯಾಗಿ ಎಲ್.ಆರ್.ರಿಝ್ವಾನ್,ಪತ್ರಿಕಾ ಕಾರ್ಯದರ್ಶಿಯಾಗಿ ಮುಹಮ್ಮದ್ ಆಸಿಫ್ ಕೋಟೆಬಾಗಿಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ನದೀಮ್ ಅವರು ಆಯ್ಕೆಯಾಗಿದ್ದಾರೆ.

ಅಬ್ದುಲ್ ಹಮೀದ್ ರಾಯಲ್ ಅವರ ನೇತೃತ್ವದಲ್ಲಿ ತಾಲೂಕು ಸಮಿತಿ ರಚನೆ ಪ್ರಕ್ರಿಯೆ ನಡೆಯಿತು.
ರಿಝ್ವಾನ್ ಎಲ್.ಆರ್.ಅವರ ಕುರಾನ್ ಪಠಣದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶೇಖ್ ನೂರುದ್ದೀನ್ ಸ್ವಾಗತಿಸಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಡಾ.ಆರಿಫ್ ಮಸೂದ್, ಟ್ರಸ್ಟಿಗಳಾದ ಮುಹಮ್ಮದ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.






