ಯಾವುದೇ ಮುನ್ಸೂಚನೆ ನೀಡದೆ ಸ್ಟೆರ್ ಲೈಟ್ ಕಂಪೆನಿಯವರು ಏಕಾಏಕಿ ಕೃಷಿಭೂಮಿಗೆ ನುಗ್ಗಿ ಫಲವತ್ತಾದ ಕೃಷಿಭೂಮಿಯನ್ನು ನಾಶ ಪಡಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತ ರೈತ, ರೈತ ಸಂಘದ ಮುಖಂಡ ಅಲ್ಫೋನ್ಸ್ ಡಿಸೋಜ ಅವರು ತಮ್ಮ ಭತ್ತದ ಗದ್ದೆ ಬಳಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.


ಸ್ಟೆರ್ ಲೈಟ್ ಕಂಪೆನಿ ವಿರುದ್ಧ ತೆಂಕಮಿಜಾರು ಗ್ರಾಮದಲ್ಲಿ ಕಳೆದ ಕೆಲವು ಸಮಯಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಆದರೆ ಅಲ್ಲಿ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ರೈತರು ಅದೆಷ್ಟು ಪ್ರತಿಭಟನೆ ಮಾಡಿದರೂ ಆ ಕಂಪೆನಿಯವರು ತಮ್ಮ ಕೆಲಸವನ್ನು ಮುಂದುವರಿಸುತ್ತಲೇ ಇದ್ದಾರೆ.
ನಿನ್ನೆ ಕೂಡಾ ಸ್ಟೆರ್ ಲೈಟ್ ಕಂಪೆನಿಯವರು ಅಲ್ಫೋನ್ಸ್ ಡಿಸೋಜ ಅವರ ತೆನೆಬಿಡುವ ಹಂತದಲ್ಲಿದ್ದ ಭತ್ತದ ಬೆಳೆಯನ್ನು ಯಾವುದೇ ಮುನ್ಸೂಚನೆ ನೀಡದೆ ಹಾನಿಗೊಳಿಸಿದ್ದು ಇಂದು ಬೆಳಿಗ್ಗೆ ರೈತರು ಒಂದಾಗಿ ಪ
ಮತ್ತೆ ಪ್ರತಿಭಟನೆಗಿಳಿದಿದ್ದಾರೆ.
“ನಾನು ಅನಾರೋಗ್ಯದಿಂದ ಬಳಲುತ್ತಿದ್ದು ನನ್ನ ಜೀವಕ್ಕೇನಾದರೂ ಆದರೆ ಅದಕ್ಕೆ ನೇರವಾಗಿ ಸ್ಟೆರ್ ಲೈಟ್ ಕಂಪೆನಿಯೇ ಹೊಣೆ” ಎಂದು ಅಲ್ಫೋನ್ಸ್ ಅವರು ಎಚ್ಚರಿಸಿದ್ದಾರೆ.







