ಮೂಡುಬಿದಿರೆಯ ಖ್ಯಾತ ಉದ್ಯಮಿ, ರುದ್ರಾಂಶ ಕನ್ಸ್ಟ್ರಕ್ಷನ್ಸ್ ಮೂಲಕ ಜನಪ್ರಿಯರಾಗಿರುವ ಅಜಯ್ ಶೆಟ್ಟಿ ಅವರಿಗೆ ‘ ಉದ್ಯಮ ರತ್ನ’ ಪ್ರಶಸ್ತಿ ಲಭಿಸಿದೆ.
ದರೆಗುಡ್ಡೆಯಲ್ಲಿ ಕರಾವಳಿ ಕೇಸರಿ ಸೇವಾ ಟ್ರಸ್ಟ್ ಹಾಗೂ ಕರಾವಳಿ ಕೇಸರಿ ಮಹಿಳಾ ಘಟಕದ ವತಿಯಿಂದ ಫೆ.21 ರಂದು ನಡೆಯಲಿರುವ ಆರನೇ ವರ್ಷದ ಶನೀಶ್ವರ ಪೂಜೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಅಜಯ್ ಶೆಟ್ಟಿ ಅವರು ರುದ್ರಾಂಶ ಕನ್ಸ್ಟ್ರಕ್ಷನ್ಸ್ ನ ಹೆಸರಿನಲ್ಲಿ ಸುಸಜ್ಜಿತವಾದ ಕಟ್ಟಡಗಳು, ಸುಂದರವಾದ ಮನೆಗಳ ನಿರ್ಮಾಣದ ಮೂಲಕ ಉಭಯ ಜಿಲ್ಲೆಗಳಲ್ಲಿ ದೊಡ್ಡ ಮಟ್ಟಿನ ಹೆಸರುಗಳಿಸಿ ಯಶಸ್ವಿ ಉದ್ಯಮಿಯೆನಿಸಿದ್ದಾರೆ.
ಸಾಮಾಜಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಅಜಯ್ ಶೆಟ್ಟಿ ಅದೆಷ್ಟೋ ಅಶಕ್ತರ ಪಾಲಿನ ಆಶಾಕಿರಣವಾಗಿದ್ದಾರೆ.
ಇವರ ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.










