ರೇಮಂಡ್ ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ

Picture of Namma Bedra

Namma Bedra

Bureau Report

ಹಿರಿಯ ಪತ್ರಕರ್ತ, ಕವಿ, ‘ಪಿಂಗಾರ’ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನ್ಹಾ ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.
‌‌‌ ತುಳುಕೂಟ ಬೆದ್ರ, ಪ್ರೆಸ್ ಕ್ಲಬ್ ಮೂಡುಬಿದಿರೆ, ಜೆಸಿಐ,ರೋಟರಿ ಕ್ಲಬ್ ಟೆಂಪಲ್ ಟೌನ್ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೇಮಂಡ್ ಅವರ ‘ಬೊಳ್ಳಿಲು’ ಕೃತಿ ಬಿಡುಗಡೆ ನಡೆಯಿತು.
ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ಮಾಜಿ ಸಚಿವ ಕೆ.ಅಭಯಚಂದ್ರ, ಬಿಜಿಪಿ ಮುಖಂಡ ಸುದರ್ಶನ ಎಂ, ತುಳುಕೂಟ ಸ್ಥಾಪಕಾಧ್ಯಕ್ಷ ಚಂದ್ರಹಾಸ ದೇವಾಡಿಗ, ಅಧ್ಯಕ್ಷ ಧನಕೀರ್ತಿ ಬಲಿಪ,ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ,ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್,ಜೆಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ,ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ಹರೀಶ್ ಎಂ.ಕೆ,ರಿಕ್ಷಾ ಚಾಲಕ ಮಾಲಕರ ಸಂಘದ ಪ್ರತಿನಿಧಿ ರಾಜೇಶ್ ಸುವರ್ಣ ಈ ಸಂದರ್ಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಗೀತಾ ಲಕ್ಷ್ಮೀಶ ಶೆಟ್ಟಿ ಕೃತಿ ಪರಿಚಯಿಸಿದರು. ವಿನಯಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಸಾಹಿತಿ ಸದಾನಂದ ನಾರಾವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ‌.ಸುರೇಶ್ ನೆಗಳಗುಳಿ, ಹಿರಿಯ ಪತ್ರಕರ್ತ,ಸಾಹಿತಿ ಧನಂಜಯ ಮೂಡುಬಿದಿರೆ, ಪದ್ಮನಾಭ ಮಿಜಾರು, ಅನಿತಾ ಶೆಟ್ಟಿ, ರಾಘವೇಂದ್ರ ಭಂಡಾರ್ಕರ್,ರಾಮಕೃಷ್ಣ ಶಿರೂರು,ಸೌಮ್ಯ ಕುಗ್ವೆ,ಮಾನಸ ಪ್ರವೀಣ್ ಭಟ್,ಶರಣ್ಯ ಬೆಳುವಾಯಿ, ಪ್ರಶಾಂತ್ ಆಚಾರ್ಯ ಎಡಪದವು ಹಾಗೂ ಸವಿತಾ ಕರ್ಕೇರಾ ತಮ್ಮ ಕವನಗಳನ್ನು ವಾಚಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top