ವಾಲ್ಪಾಡಿ – ಅಳಿಯೂರು ಪರಿಸರದಲ್ಲಿ ಈ ಕುದುರೆ ಬಾರೀ ಫೇಮಸ್ ಆಗಿತ್ತು. ಅಂದರೆ ಈ ಪರಿಸರದಲ್ಲಿ ಬೇರೆ ಯಾರೂ ಕುದುರೆ ಸಾಕಿರಲಿಲ್ಲ. ಆದರೆ ನಮ್ಮ ಶಿವಾನಂದ ಪಾಂಡ್ರು ಈ ಭಾಗದ ಇತಿಹಾಸದಲ್ಲಿ ಕುದುರೆ ಸಾಕಿದ ಮೊದಲಿಗ ಎಂಬ ಹೆಸರು ಗಳಿಸಿದ್ದಾರೆ.


ಕುದುರೆ ಸಾಕುವುದೆಂದರೆ ದೊಡ್ಡ ಸಂಗತಿ. ” ಸಾಹುಕಾರನ ಕುದುರೆ” ಎಂದೆಲ್ಲಾ ಈ ಹಿಂದೆ ಜನರಾಡಿಕೊಳ್ಳುತ್ತಿದ್ದರು.ಅದರರ್ಥ ಸಾಹುಕಾರನಿಗೆ ಮಾತ್ರ ಕುದುರೆ ಸಾಕಲು ಸಾಧ್ಯ ಎನ್ನುವುದು.
ಆದರೆ ನಮ್ಮ ಪಾಂಡ್ರು ಹಾಗಲ್ಲ. ಕಷ್ಟವೋ- ನಷ್ಟವೋ…ಕಳೆದ ಏಳೆಂಟು ವರ್ಷಗಳಿಂದ ಈ ಕುದುರೆಯನ್ನು ಬಹಳ ಪ್ರೀತಿಯಿಂದ ಸಾಕಿದ್ದರು.
ಅಳಿಯೂರು ಸುತ್ತಮುತ್ತಲ ಪರಿಸರದ ಜನರೂ ಈ ಕುದುರೆಯನ್ನು’ ಶಿವಾನಂದನ ಕುದುರೆ’ ಅಂತ ಪ್ರೀತಿಯಿಂದ ನೋಡುತ್ತಿದ್ದರು.
ಅಂದಹಾಗೆ ‘ ಲಕ್ಷ್ಮಿ’ ಹೆಸರಿನ ಈ ಕುದುರೆಯನ್ನು ‘ ಚೆನ್ನಾಗಿ ಸಾಕು ‘ ಅಂತ ಶಿವಾನಂದ ಪಾಂಡ್ರು ಅವರಿಗೆ ಕೊಟ್ಟದ್ದು ಕನ್ಯಾನದ ದಿ.ಸ್ವಾಮೀಜಿಯವರು.
ಎಂಟು ವರ್ಷಗಳಿಂದ ಈ ಪರಿಸರದಲ್ಲಿ ಎಲ್ಲರ ಪ್ರೀತಿಯ ‘ ಲಕ್ಷ್ಮಿ’ ಆಗಿದ್ದ ಈ ಕುದುರೆ ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನವಾಗಿದೆ.
ಅದರ ಅಂತ್ಯಕ್ರಿಯೆಯನ್ನು ಶಿವಾನಂದ ಪಾಂಡ್ರು ಮತ್ತು ಬಳಗದವರು ಶಾಸ್ತ್ರ ಪ್ರಕಾರ ನೆರವೇರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.










