ಬನ್ನಡ್ಕ ಬಳಿ ಇನ್ನೆಷ್ಟು ಬಲಿ ??*ಅಂಬುಲೆನ್ಸ್ ಸ್ಪೀಡ್ ಗೆ ಪ್ರಾಣ ಕಳೆದುಕೊಂಡ ರಿಕ್ಷಾ ಡ್ರೈವರ್ !

Picture of Namma Bedra

Namma Bedra

Bureau Report

ಅದ್ಯಾಕೋ ಗೊತ್ತಿಲ್ಲ. ಕಾರ್ಕಳ- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡು ರಸ್ತೆ ಅಗಲೀಕರಣವಾದ ನಂತರ ಬನ್ನಡ್ಕ ಪ್ರದೇಶದಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿದೆ. ಹಲವು ಜೀವಗಳ ಬಲಿಯಾಗಿದೆ.
ಇದೀಗ ಈದಿನ ಮತ್ತೊಂದು ಅಪಘಾತ ಸಂಭವಿಸಿ ಹಿರಿಯ ಜೀವವೊಂದು ಪ್ರಾಣ ಕಳೆದುಕೊಂಡಿದೆ.
ಈ ದಿನ ಮೃತಪಟ್ಟವರು ಜಾನ್ ಕೊರೆಯಾ ಎನ್ನುವ ಹಿರಿಯ ರಿಕ್ಷಾ ಚಾಲಕ. ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆಯ ಹಳೆ ಬಸ್ಸುನಿಲ್ದಾಣ ಬಳಿ ( ಮರದಡಿ) ಇರುವ ರಿಕ್ಷಾ ಪಾರ್ಕಲ್ಲಿ ತನ್ನ ರಿಕ್ಷಾ ಇಟ್ಟು ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದ ಜಾನ್ ಕೊರೆಯಾ ಅವರು ಸಾಧು ಸ್ವಭಾವದವರು. ತಾನಾಯ್ತು ತನ್ನ ಬಾಡಿಗೆಯಾಯ್ತು ಎಂದು ಇದ್ದ ಅವರು ಈದಿನ ಬನ್ನಡ್ಕದ ಮಠದಲ್ಲಿ ನಡೆಯುತ್ತಿದ್ದ ಕರ್ಯಕ್ರಮಕ್ಕೆ ಜನರನ್ನು ಬಿಟ್ಟು ವಾಪಾಸು ತೆಗೆಯುವಷ್ಟರಲ್ಲಿ ಅಂದರೆ ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಅತಿವೇಗದಿಂದ ಹೋಗುತ್ತಿದ್ದ ನಿಟ್ಟೆಯ ಅಂಬುಲೆನ್ಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ರಿಕ್ಷಾದ ಮೇಲ್ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ಜಾನ್ ಕೊರೆಯಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಜಾನ್ ಕೊರೆಯಾ ಅವರ ರಿಕ್ಷಾ ಕಳೆದ ಕೆಲ ತಿಂಗಳ ಹಿಂದೆ ಮಹಾವೀರ ಕಾಲೇಜು ಬಳಿಯ ಪೆಟ್ರೋಲ್ ಪಂಪ್ ಬಳಿ ಅಪಘಾತಗೊಂಡಿತ್ತು.ಅಂದು ತನ್ನದಲ್ಲದ ತಪ್ಪಿಗೆ ಒಂದುಲಕ್ಷಕ್ಕಿಂತಲೂ ಅಧಿಕ ಹಣ ಕಳೆದುಕೊಂಡಿದ್ದರು. ಈ ವಿಷಯದ ಬಗ್ಗೆ ತನ್ನ ಆಪ್ತರಲ್ಲಿ ಹೇಳಿಕೊಂಡು ಬೇಸರ ಮಾಡಿದ್ದ ಅವರು ಒಂದೇ ಗಂಟೆಯ ಅಂತರದಲ್ಲಿ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಬನ್ನಡ್ಕದಲ್ಲಿ ಪದೇಪದೇ ಅಪಘಾತಗಳು ಸಂಭವಿಸಿ ಜೀವಬಲಿಯಾಗಲು ಕಾರಣವೇನು ? ಎನ್ನುವುದು ಜನರು ಪ್ರಶ್ನೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top