ಬೆದ್ರಕ್ಕೆ ಮತ್ತೊಂದು ಗರಿ *ಓಪನಾಯ್ತು ವಸ್ತ್ರ ವೈವಿಧ್ಯದ ‘ಝರಿ’

Picture of Namma Bedra

Namma Bedra

Bureau Report

ವಸ್ತ್ರ ವೈವಿಧ್ಯದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿರುವ ಝರಿ ಕೌಚರ್ ಸಂಸ್ಥೆಯ ನೂತನ ಮಳಿಗೆ ‘ ಝರಿ ಬೆದ್ರ’ ದ ಉದ್ಘಾಟನೆ ಹಳೆ ಬಸ್ಸುನಿಲ್ದಾಣದ ಬಳಿಯ ನವಮಿ ಪ್ಲಾಜಾದಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿದೆ.
ಹಿರಿಯರಾದ ವಿಜಯಲಕ್ಷ್ಮಿ ಆರಿಗ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಇಂದು ಎಂ.ಅವರು “ಝರಿ ವಸ್ತ್ರ ಮಳಿಗೆ ಮೂಡುಬಿದಿರೆಯಲ್ಲಿ ಆರಂಭಗೊಂಡಿರುವುದರಿಂದ ಮಹಿಳೆಯರಿಗೆ ಅನುಕೂಲವಾಗಿದೆ,ಒಂದೇ ಸೂರಿನಡಿ ತಮ್ಮಿಷ್ಟದ ವಸ್ತ್ರಗಳನ್ನು ಖರೀದಿಸುವ ಅವಕಾಶ ಲಭಿಸಿದೆ,ಈ ವಸ್ತ್ರ ಮಳಿಗೆ ಮೂಡುಬಿದಿರೆಯಲ್ಲಿ ಯಶಸ್ವಿಯಾಗಿ ಮುನ್ನಡೆದು ಈಭಾಗದ ಜನರ ಅಚ್ಚುನೆಚ್ಚಿನ ಆಯ್ಕೆಯ ಮಳಿಗೆಯಾಗಲಿ ” ಎಂದು ಹಾರೈಸಿದರು.
ಜಯಶ್ರೀ ಅಮರನಾಥ ಶೆಟ್ಟಿ, ಮಂಜುಳಾ ಅಭಯಚಂದ್ರ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ನಂದಿತಾ ಕೆ. ಮತ್ತು ವಿಜೇಶ್ ಅತಿಥಿಗಳನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.ಪ್ರಮಯಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top