ಪಡುಮಾರ್ನಾಡು ಗ್ರಾಮ ಪಂಚಾಯತ್ ಬಳಿಯ ಅಚ್ಚರಕಟ್ಟೆಯ ರಸ್ತೆಯೊಂದು ತೀರಾ ದುಸ್ಥಿತಿಯಲ್ಲಿದ್ದು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ರಸ್ತೆಯ ಮಧ್ಯೆ ಹೊಂಡಗಳು ಬಿದ್ದಿದ್ದು ಡಾಮಾರು ಅಲಕ್ಕ ಮಯಕ್ಕವಾಗಿದೆ. ಇಲ್ಲಿ ರಸ್ತೆ ಯಾವುದು, ಗುಂಡಿ ಯಾವುದೆಂದೇ ಗೊತ್ತಾಗುತ್ತಿಲ್ಲ.

ಶಾಲೆ ಪ್ರಾರಂಭವಾಗಲು ದಿನ ಸಮೀಪಿಸುತ್ತಿದೆ. ಹಲವು ಮಕ್ಕಳು ಇದೇ ರಸ್ತೆಯಾಗಿ ಶಾಲೆಗೆ ಹೋಗಬೇಕಿದ್ದು ಶಾಲೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಸಂಬಂಧಪಟ್ಟವರು ಈ ರಸ್ತೆಯನ್ನು ಸರಿಪಡಿಸಿ ಶಾಲಾ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಸ್ಥಳೀಯರು,ಸಮಾಜ ಸೇವಕರಾದ ಆರ್.ಡಿ.ಅಂಚನ್ ಅವರು ಆಗ್ರಹಿಸಿದ್ದಾರೆ.





