ಎ.ಕೆ.ಎಂದರೆ ಅರುಣ್ ಕುಮಾರ್ ಶೆಟ್ಟಿ. ಬುಧವಾರ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುವ ಸುಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೆಲ್ಲಾ ಬೆಂಗಳೂರಿಗೆ ಹೋಗಿದ್ದರು, ಇನ್ನು ಕೆಲವರು ‘ಪಟಾಕಿ’ ಬಿಡಲು ತಯಾರಾಗಿದ್ದರು.ಆದರೆ ಕಾಂಗ್ರೆಸ್ ಮುಖಂಡರೂ, ಗ್ಯಾರಂಟಿ ಯೋಜನೆಯ ಅಧ್ಯಕ್ಷರೂ ಆಗಿರುವ ಅರುಣ್ ಕುಮಾರ್ ಶೆಟ್ಟಿ ಮಾತ್ರ ತನ್ನ ಎಂದಿನ ಜನಸೇವೆಯನ್ನು ಮುಂದುವರಿಸಿ ಚರಂಡಿ ದುರಸ್ಥಿ ಕಾರ್ಯದಲ್ಲಿ ನಿರತರಾಗಿದ್ದರು. ಇದು ಮಾದರಿಯ ಕೆಲಸವೆಂದಿದ್ದಾರೆ ಜನರು.

ಸದಾ ಜನಸೇವೆಯಲ್ಲೇ ತೃಪ್ತಿ ಕಾಣುವ ಅರುಣ್ ಶೆಟ್ಟಿ ಅವರಿಗೂ ಬೆಂಗಳೂರಿಗೆ ಹೋಗಬಹುದಿತ್ತು.ತನ್ನ ನೆಚ್ಚಿನ ನಾಯಕನ ಪಟ್ಟಾಭಿಷೇಕವನ್ನು ನೋಡಿ ಕುಷಿಪಡಬಹುದಿತ್ತು. ಆದರೆ, ಜನಸೇವೆಯೇ ಪ್ರಧಾನ ಎಂಬಂತೆ ಜನರಿಗೆ ಅನುಕೂಲವಾಗುವಂತೆ ಚರಂಡಿಯ ಕೊಳಚೆ ನೀರಲ್ಲೇ ನಿಂತು ಕೆಲಸ ಮಾಡಿ ಮತ್ತೊಮ್ಮೆ ಗಮನಸೆಳೆದಿದ್ದಾರೆ.
ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಹಲವಾರು ಬಡ ಕುಟುಂಬಗಳಿಗೆ ಸರಕಾರದ ಸವಲತ್ತುಗಳನ್ನು, ಹಕ್ಕುಪತ್ರದಂತಹ ಅಗತ್ಯ ದಾಖಲೆಗಳನ್ನು ಒದಗಿಸಿಕೊಟ್ಟು ಮೂಡುಬಿದಿರೆ ಪರಿಸರದಲ್ಲಿ ಜನಪ್ರಿಯರಾಗಿರುವ ಅರುಣ್ ಕುಮಾರ್ ಶೆಟ್ಟಿ ಅವರ ಇಂತಹ ಕೆಲಸಗಳು ಒಬ್ಬ ಉತ್ತಮ ನಾಯಕನ ಲಕ್ಷಣಗಳನ್ನು ತೋರಿಸುತ್ತದೆ.






