ಈರೀತಿ ಚರಂಡಿ ಮಾಡಿ ಹೋದರೆ…. ವ್ಯಾಪಾರ ಮಾಡೋದಾದರೂ ಹೇಗೆ ??

Picture of Namma Bedra

Namma Bedra

Bureau Report

ಬೆದ್ರದ ಕೃಷ್ಣ ಕಟ್ಟೆಯ ಬಳಿ ನೀರು ನಿಂತು ಜನಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಎರಡು ದಿನಗಳ ಹಿಂದೆ ‘ ನಮ್ಮಬೆದ್ರ’ ವರದಿ ಮಾಡಿತ್ತು.ಪುರಸಭೆಯವರು ಅದಕ್ಕೆ ಸ್ಪಂದಿಸಿದ್ದಾರೆ.ಧನ್ಯವಾದಗಳು.
ನೀರು ಹೋಗಲಿ ಎಂದು ಚರಂಡಿ ಮಾಡುವ ಕಾಮಗಾರಿ ಪ್ರಾರಂಭವಾಗಿದೆ.ಆದರೆ ಚರಂಡಿ ಮಾಡುವಾಗ ಅಗೆದ ಮಣ್ಣನ್ನು ಅಲ್ಲೇ ರಾಶಿಹಾಕಿರುವುದರಿಂದ ಅಲ್ಲಿನ ಹಣ್ಣುಹಂಪಲು ವ್ಯಾಪಾರಿಯೊಬ್ಬರಿಗೆ ಕಷ್ಟವಾಗಿದೆ.
ಈ ಮಣ್ಣಿನ ರಾಶಿಯನ್ನು ದಾಟಿಕೊಂಡು ಗ್ರಾಹಕರು ಹೋಗ್ತಾರಾ?
ಅಂಗಡಿ ಮುಂದೆಯೇ ಈ ರೀತಿ ಮಣ್ಣು ಹಾಕಿದರೆ ವ್ಯಾಪಾರ ಮಾಡೋದಾದರೂ ಹೇಗೆ ? ಪುರಸಭೆಯವರು ಈ ಬಡ ವ್ಯಾಪಾರಿಯ ಬಗ್ಗೆನೂ ದಯೆ ತೋರಿಸಿ ಅಲ್ಲಿನ ಮಣ್ಣಿನ ರಾಶಿಯನ್ನು ಸರಿಪಡಿಸುವ ಅಗತ್ಯವಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top