ಕಲ್ಲಮುಂಡ್ಕೂರಿನ ಕೆ.ಎಫ್.ಸಿ.ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ವತಿಯಿಂದ ‘ಕೆಸರ್ದ ಗಮ್ಮತ್’ – ಕೆಸರುಗದ್ದೆ ಕ್ರೀಡಾಕೂಟವು ನಾಳೆ ಬೆಳಿಗ್ಗೆಯಿಂದ ಸಂಜೆವರೆಗೆ ಕಲ್ಲಮುಂಡ್ಕೂರಿನ ದೈಲಬೆಟ್ಟು ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚಿತ್ರ ಕಲಾವಿದ ಸದಾಶಿವ ಕುದ್ರಿಪದವು,ಸಮಾಜ ಸೇವಕಿ ವಿಜಯಾ ಕಾಮತ್,ಕಲಾಕಾರ ಜಯ ಸಾಲ್ಯಾನ್, ಕೃಷಿಕ ಜಾನು ಪೂಜಾರಿ ಹಾಗೂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸುಧೀಕ್ಷಾ ನಾಯ್ಕ್ ಅವರನ್ನು ಸನ್ಮಾನಿಸಲಾಗುವುದು.
ಕೊಪ್ಪಳ ಅನ್ನಪೂರ್ಣೇಶ್ವರಿ ಕನ್ಸ್ಟ್ರಕ್ಷನ್ಸ್ ನ ಅರುಣ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ನಿಡ್ಡೋಡಿ ಚಾವಡಿಮನೆ ಡಾ.ಜಗನ್ನಾಥ ಶೆಟ್ಟಿ, ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಕುಮಾರ್ ಅಮೀನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.







