ವಾಲ್ಪಾಡಿ ಮಾಡದಂಗಡಿ ಶಾಲೆಯಲ್ಲಿ ಸುಮಾರು 18 ವರ್ಷಗಳಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮಾಂಟ್ರಾಡಿ ಶಾಲೆಗೆ ಪದೋನ್ನತಿ-ವರ್ಗಾವಣೆಗೊಂಡಿರುವ ವಾಣಿಶ್ರೀ ಅವರನ್ನು ಬೀಳ್ಕೊಡುವ ಸಮಾರಂಭವು ಮಾಡದಂಗಡಿ ಶಾಲೆಯಲ್ಲಿ ಶನಿವಾರ ನಡೆಯಿತು.
ಶಿರ್ತಾಡಿ ಭುವನಜ್ಯೋತಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಪ್ರಶಾಂತ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಆಶೀರ್ವಾದ್ ಶಿರ್ತಾಡಿ,ಭುನನಜ್ಯೋತಿ ಎಜುಕೇಶನ್ ಟ್ರಸ್ಟ್ ಸದಸ್ಯೆ ಲತಾ ಎ, ಶಶಿಧರ ದೇವಾಡಿಗ ಶಿರ್ತಾಡಿ,ಅರುಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಆಶೀರ್ವಾದ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಯೂಸುಫ್, ಮಾಜಿ ಅಧ್ಯಕ್ಷರಾದ ಸುಧಾಕರ ಸುವರ್ಣ,ಪ್ರಭಾವತಿ,ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಆನಂದ, ಮಹಿಳಾ ಮಂಡಲದ ಅಧ್ಯಕ್ಷೆ ಜೆಸಿಂತಾ ಫೆರ್ನಾಂಡಿಸ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್, ಚೆನ್ನ ವಾಲ್ಪಾಡಿ, ಶಿಕ್ಷಕಿ ಶೈಲಜಾ,ಅಂಗನವಾಡಿ ಶಿಕ್ಷಕಿ ಸುನೀತಾ , ಎಸ್.ಡಿ.ಎಂಸಿ.ಉಪಾಧ್ಯಕ್ಷೆ ಶೋಭಾ,ಎಸ್.ಡಿ.ಎಂ.ಸಿ.ಸದಸ್ಯರಾದ ಅಲ್ತಾಫ್, ಸುಶೀಲ, ವೇದಾವತಿ,ಚಂದ್ರಾವತಿ,ರೇಣುಕಾ, ಸಲೀಮ್, ಶಾರದಾ, ಮುಸ್ತಫಾ ,ಫ್ರೆಂಡ್ಸ್ ವಾಲ್ಪಾಡಿಯ ಹನೀಫ್, ಆಸಿಫ್,ಇರ್ಷಾದ್, ರಮೀಝ್, ಅಶ್ರಫ್, ಗಫೂರ್,ಹಸನಬ್ಬ,ಆರಿಫ್,ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರಶ್ಮಿ ಎಂ.ಎಸ್.ಸ್ವಾಗತಿಸಿ ವಾಣಿ ಟೀಚರ್ ಕುರಿತು ಅಭಿನಂದನಾ ಭಾಷಣ ಮಾಡಿದರು.ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







































