ಶ್ರೀಧರ್ ಅವರಿಗೆ ಡಿ.ಎಫ್.ಒ. ಆಗಿ ಪದೋನ್ನತಿ *ಮೂಡುಬಿದಿರೆ ಎಸಿಎಫ್ ಆಗಿ ಆಕಾಶ್ ಧನಾಜಿ ಕದಮ್

Picture of Namma Bedra

Namma Bedra

Bureau Report

ಅರಣ್ಯ ಇಲಾಖೆ ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಶ್ರೀಧರ್ ಅವರು ಸೇವೆಯಲ್ಲಿ ಪದೋನ್ನತಿ ಹೊಂದಿದ್ದಾರೆ.
ಮೂಡುಬಿದಿರೆಯ ನೂತನ ಎಸಿಎಫ್ ಆಗಿ ಆಕಾಶ್ ಧನಾಜಿ ಕದಮ್ (IFS) ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮೂಲತಃ ಮಹಾರಷ್ಡ್ರದವರಾಗಿರುವ ಕದಮ್ ಅವರು ಶಿವಮೊಗ್ಗದಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸಿದ್ದರು.
ಮಂಗಳೂರು,ಮೂಡುಬಿದಿರೆಯಲ್ಲಿ ಎಸಿಎಫ್ ಆಗಿ ಸೇವೆ ಸಲ್ಲಿಸುತ್ತಾ ಸರ್ವರ ಪ್ರೀತಿ, ವಿಶ್ವಾಸಗಳಿಸಿದ್ದ ಶ್ರೀಧರ್ ಅವರು ಹಲವಾರು ಅರಣ್ಯ ಕಾರ್ಯಕ್ರಮಗಳನ್ನು, ನೂತನ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪ್ರಿಯರಾಗಿದ್ದರು.ಇದೀಗ ಅವರು ಡಿಎಫ್ಒ ಆಗಿ ಪದೋನ್ನತಿ ಹೊಂದಿರುವುದೂ ಸಂತಸವುಂಟುಮಾಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top