‘ಅಶ್ಮಿತ್ ಗೆದ್ದೇ ಗೆಲ್ತಾನೆ’- ಗ್ಯಾರಂಟಿ ಸದಸ್ಯನ ಗ್ಯಾರಂಟಿ!

Picture of Namma Bedra

Namma Bedra

Bureau Report

ಸರಿಗಮಪ 2026 ನೇ ಸಾಲಿನ ‘ಲಿಟಲ್ ಚಾಂಪಿಯನ್’ ಆಗಿ ಅಶ್ಮಿತ್ ಗೆಲ್ಲುವುದು ಗ್ಯಾರಂಟಿ ಎಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಯೋಜನಾ ಸಮಿತಿಯ ಸದಸ್ಯ ಶಿವಾನಂದ ಪಾಂಡ್ರು ಅವರು ಭವಿಷ್ಯ ನುಡಿದಿದ್ದಾರೆ.
ಅಶ್ಮಿತ್ ಗೆಲುವಿಗಾಗಿ ಶುಕ್ರವಾರ ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ‘ನಮ್ಮ ಬೆದ್ರ’ದೊಂದಿಗೆ ಮಾತನಾಡಿದ ಅವರು ‘ಅಶ್ಮಿತ್ ನಮ್ಮ ಕುಟುಂಬದ ಪ್ರತಿಭಾವಂತ ಪ್ರತಿಭೆ, ವಯೊಲಿನ್, ಸಂಗೀತ, ಚೆಂಡೆ ಮತ್ತು ಹುಲಿವೇಷದ ತಾಸೆಯಲ್ಲಿ ಪರಿಣತಿ ಹೊಂದಿದ ಹುಡುಗ,ಕರಾವಳಿ ಸೇರಿದಂತೆ ರಾಜ್ಯದ ಅಭಿಮಾನಿಗಳ ಮತಗಳು ಅಶ್ಮಿತ್ ಗೆಲುವಿಗೆ ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ.
ಅಶ್ಮಿತ್ ತಂದೆ ಜಯರಾಮ್ ಅವರು ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಂಬೇಡ್ಕರ್ ತೀರ್ಥಸ್ಥಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಾಗಿದ್ದ ಅವರು ರಾಷ್ಟ್ರೀಯ ಅಂಬೇಡ್ಕರ್ ಪುರಸ್ಕಾರ ಪಡೆದಿದ್ದಾರೆ, ಪಾಣರ ಸಂಘದ ದ.ಕ.ಜಿಲ್ಲಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದು ಪ್ರಸ್ತುತ ಸರಕಾರದಲ್ಲಿ ಅಲೆಮಾರಿ ಮತ್ತು ಸೂಕ್ಷ್ಮ ಅತಿ ಸೂಕ್ಷ್ಮಸಮುದಾಯಗಳ ಅಭಿವೃದ್ಧಿ ಕೋಶದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಶ್ಮಿತ್ ಗೆಲುವಿಗೆ ತಂದೆ ತಾಯಿಯ ಆಶೀರ್ವಾದವಿದೆ,ರಾಜ್ಯದ ಸಾವಿರಾರು ಅಭಿಮಾನಿಗಳ ಬೆಂಬಲವಿದೆ,ಆತ ಗೆದ್ದೇ ಗೆಲ್ತಾನೆ- ನನ್ನ ಮಾತು ಹುಸಿಯಾಗದು ಎಂದು ಶಿವಾನಂದ ಪಾಂಡ್ರು ಅವರು ಹೇಳಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top