ಮೂಡುಬಿದಿರೆಯ ರಿಯಲ್ ಹೀರೋಗಳಾದ ಪೌರಕಾರ್ಮಿಕರು!

Picture of Namma Bedra

Namma Bedra

Bureau Report

‌‌ ನಿನ್ನೆಯ ದಿನ ನಡೆದ ಬೆದ್ರ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ, ಶೋಭಾಯಾತ್ರೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
ದೊಡ್ಡ ಸಂಖ್ಯೆಯಲ್ಲೇ ಅಂಗಡಿಗಳು, ತಿಂಡಿ, ಪಾನೀಯ, ಚರ್ಮುರಿ, ಐಸ್ ಕ್ರೀಮ್ ಹೀಗೆ ನಾನಾ ಬಗೆಯ ಅಂಗಡಿಗಳು ರಸ್ತೆಯುದ್ದಕ್ಕೂ ಇತ್ತು.


ಕೆಲವೆಡೆ ತಿಂದ ತಿಂಡಿಗಳ ಪ್ಲಾಸ್ಟಿಕ್, ಕಸಗಳನ್ನು ಹಾಕಲು ಬುಟ್ಟಿಯ ವ್ಯವಸ್ಥೆ ಮಾಡಿದ್ದರು.ಹೆಚ್ಚಿನವರು ತಿಂಡಿ ಖರೀದಿಸಿ ರಸ್ತೆಯುದ್ದಕ್ಕೂ ತಿನ್ನುತ್ತಾ ಹೋಗಿ ಕಸವನ್ನು ರಸ್ತೆ ಬದಿಗಳಲ್ಲಿ ಎಸೆದದ್ದೇ ಹೆಚ್ಚು.
ಕಸ ವಿಲೇವಾರಿ ಮಾಡಿ ಸ್ವಚ್ಛ ಮೂಡುಬಿದಿರೆಯನ್ನಾಗಿ ಮಾಡಲು ಮೂಡುಬಿದಿರೆ ಪುರಸಭೆಯವರು ಪೌರಕಾರ್ಮಿಕರನ್ನು ರೆಡಿ ಮಾಡಿದ್ದರು.ಅದರಂತೆ ಗಣೇಶ ವಿಸರ್ಜನೆ ಮುಗಿದ ಕೂಡಲೇ ಬೇಳಗ್ಗಿನ ಜಾವ ಮೂಡುಬಿದಿರೆಯ ಪೌರಕಾರ್ಮಿಕರು ರಸ್ತೆಬದಿ ಸ್ಚಚ್ಚಗೊಳಿಸುವ ಮೂಲಕ ಸುದ್ದಿಯಾಗಿದ್ದಾರೆ.
ಮೂಡುಬಿದಿರೆಯ ರಿಯಲ್ ಹೀರೋಗಳಾಗಿ ಗಮನಸೆಳೆದಿರುವ ಪೌರಕಾರ್ಮಿಕರ ಈ ಕೆಲಸಕ್ಕೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top