ಬದುಕಿಗೆ ದಾರಿದೀಪವಾಗಿರುವ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತು ಊರ ಪರವೂರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಆಶಯದೊಂದಿಗೆ ತೋಡಾರಿನ ಶ್ರೀ ಕೊಡಮಣಿತ್ತಾಯ ದೇವಸ್ಥಾನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಮೂರನೇ ವರ್ಷದ ‘ತುಡರಾಯನ ಪಂಥೊಲು ‘ ಎಂಬ ವಿನೂತನ ಧಾರ್ಮಿಕ ಸ್ಪರ್ಧಾಕೂಟ ನಡೆಯಿತು.
ಚಿಣ್ಣರು,ಕಿರಿಯ. ಹಿರಿಯ ಎಂಬ ಮೂರು ವಿಭಾಗಗಳಲ್ಲಿ ಭಕ್ತಿಗೀತೆ,ಭಜನೆ,ರಂಗೋಲಿ ,ಹೂ ಕಟ್ಟುವುದು, ಶ್ಲೋಕ ಪಠಣ,ಚಿತ್ರಕಲೆ,ಕ್ಲೆ ಮಾಡೆಲಿಂಗ್, ಹಿಡಿಸೂಡಿ ತಯಾರಿ,ಕಥೆ ಹೇಳುವುದು, ಆಶುಭಾಷಣ,ಶಂಖ ಊದುವುದು ಹೀಗೆ ಸುಮಾರು ಹನ್ನೆರಡು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪ್ರಶಸ್ತಿ ಪತ್ರ,ನಗದು ಬಹುಮಾನಗಳನ್ನು ವಿತರಿಸಲಾಯಿತು.



ದ.ಕ.,ಉಡುಪಿ ಜಿಲ್ಲೆಗಳಿಂದ ವಿದ್ಯಾರ್ಥಿಗಳ ಸಹಿತ ಸುಮಾರು 600 ಮಂದಿ ಯುವಕರು, ಮಹಿಳೆಯರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರದ ಧರ್ಮದರ್ಶಿ,ಅನುವಂಶಿಕ ಆಡಳಿತದಾರರಾದ ತೋಡಾರುಗುತ್ತು ವಿಶಾಲಕೀರ್ತಿ ಬಲಿಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕ್ಷೇತ್ರದ ಪ್ರಧಾನ ಪುರೋಹಿತರಾದ ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.